ಚೆನ್ನೈ, ಕೇರಳ ಮೊದಲಾದೆಡೆ ಸಂಚರಿಸಿದ್ದ ಉಗ್ರ ರಾಜಧಾನಿಯಲ್ಲೂ ಕಾಣಿಸಿಕೊಂಡಿದ್ದಾನೆ ಎಂಬ ಆಘಾತಕಾರಿ ವಿಷಯ ಹೊರಬಿದ್ದಿದೆ.ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ನಗರದೆಲ್ಲಡೆ ಪೊಲೀಸರಿಂದ ಹದ್ದಿನಕಣ್ಣು ಇಡಲಾಗಿದೆ. ಬೆಂಗಳೂರಿಗೂ ಉಗ್ರ ಬಂದಿದ್ದ ಎನ್ನಲಾಗುತ್ತಿದೆ. ಸೆಂಟ್ರಲ್ ಐಬಿಯಿಂದ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ.ಬೆಂಗಳೂರು, ಚೆನ್ನೈ, ಕೇರಳ ಮೊದಲಾದೆಡೆ ಸಂಚರಿಸಿದ್ದ ಉಗ್ರನ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಬಂದಿದ್ದ ಮಾಹಿತಿ ಇದಾಗಿದ್ದು, ನ್ಯಾಷನಲ್ ತೌಹಿತ್ ಜಮಾತ್ ಸಂಘಟನೆಯ ಸದಸ್ಯ ಬಂದಿದ್ದನು ಎನ್ನಲಾಗುತ್ತಿದೆ.