ಖದೀಮ ಕಳ್ಳನೊಬ್ಬ ಪ್ರಸಿದ್ಧ ದೇವಸ್ಥಾನಕ್ಕೆ ನುಗ್ಗಿ ದೇವರಿಗೆ ನಮಿಸಿ ಹಣ ದೋಚಲು ಮುಂದಾಗಿದ್ದ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಕಾಲಜ್ಞಾನಿ ಬಸವೇಶ್ವರ ದೇವಸ್ಥಾನ ಮೇಲೆ ಕಣ್ಣು ಹಾಕಿ ಹಣ ದೋಚಲು ಹೋದ ಹುಡುಗನೊಬ್ಬ ಈಗ ಜೈಲು ಪಾಲಾಗಿದ್ದಾನೆ. ದೇವರಿಗೆ ನಮಸ್ಕಾರ ಮಾಡಿ ಅದೇ ದೇಗುಲದಲ್ಲಿ ರಾತ್ರಿ ದರೋಡೆಗೆ ಯತ್ನಿಸಿದ್ದ ಕಳ್ಳ ಮಾಳಿಂಗರಾಯ ಜೈಲು ಸೇರಿದ್ದಾನೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಕೊಡೇಕಲ್ ಬಸವೇಶ್ವರ ದೇಗುಲದಲ್ಲಿ ಘಟನೆ ನಡೆದಿದೆ.