ಬೆಂಗಳೂರು:ಹೆಮ್ಮಾರಿ ಕೊರೊನಾ ಕಾರಣಕ್ಕೆ ಶಾಲಾ ಕಾಲೇಜುಗಳು ಬಂದ್ ಆಗಿ ವರ್ಷಗಳೇ ಉರುಳಿವೆ. ಶಾಲೆ ಮಾತ್ರ ಓಪನ್ ಆಗೋ ಲಕ್ಷಣವೇ ಕಾಣ್ತಿಲ್ಲ. ಇನ್ನು ಕೊರೊನಾ ಸಂಖ್ಯೆ ಇಳಿಕೆ ಕಾಣುತ್ತಿದ್ದು ಶಾಲೆಗಳನ್ನು ಮತ್ತೆ ಓಪನ್ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಆದರೆ ಶಿಕ್ಷಣ ಇಲಾಖೆ ಮಾತ್ರ ಈ ಬಗ್ಗೆ ಕ್ಯಾರೆ ಅಂತಿಲ್ಲ. ಹೀಗಾಗಿ ಇದೀಗ ನೂತನ ಸಿಎಂ ವಿರುದ್ದ ಖಾಸಗಿ ಶಾಲೆಗಳು ಸಿಡಿದೆದ್ದಿದ್ದು ಸಿಎಂಗೆ ಶಾಲಾರಂಭಕ್ಕೆ ಡೆಡ್ ಲೈನ್ ಫಿಕ್ಸ್ ಮಾಡಿವೆ.