ಎಸಿಬಿ ಅಧಿಕಾರಿಗಳ ಭರ್ಜರಿ ಘರ್ಜನೆ!

ಮಂಗಳೂರು| Ramya kosira| Last Modified ಬುಧವಾರ, 24 ನವೆಂಬರ್ 2021 (14:37 IST)


ಇತ್ತ ಮಂಗಳೂರಿನಲ್ಲೂ ಕೂಡ ಎಸಿಬಿ ಅಧಿಕಾರಿಗಳು ಭರ್ಜರಿಯಾಗಿ ಘರ್ಜಿಸಿದ್ದಾರೆ.
ಸ್ಮಾರ್ಟ್ ಸಿಟಿ ಎಕ್ಸಿಕ್ಯೂಟಿವ್ ಇಂಜಿನಿಯರ್ ನಿಂಗೇಗೌಡರ ಮನೆ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಮಂಗಳೂರು ನಗರದ ಊರ್ವದಲ್ಲಿರುವ ಇಂಜಿನಿಯರ್ ನಿಂಗೇಗೌಡ ಮನೆ ಮೇಲೆ ದಾಳಿ ನಡೆಸಿ, ಹೆಚ್ಚಿನ ಮಾಹಿತಿಯನ್ನ ಕಲೆ ಹಾಕಿದ್ದಾರೆ. ಇನ್ನು ನಿಂಗೇಗೌಡರ ಮೇಲೆ ಅಕ್ರಮ ಆಸ್ತಿ ಸಂಪಾದನೆ ಆರೋಪ ಕೇಳಿಬಂದಿತ್ತು. ಈ ಸಂಬಂಧ ದೂರು ಕೂಡ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಏಳು ಮಂದಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ, ಮನೆಯಲ್ಲಿ ಸಿಕ್ಕ ಮಹತ್ವದ ದಾಖಲೆಗಳನ್ನ ಇಂಚಿಚೂ ಪರಿಶೀಲನೆ ನಡೆಸುತ್ತಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :