ಲೋಕಸಮರಕ್ಕಾಗಿ ಒಂದಷ್ಟು ದಿನ ತೆರೆಮರೆಗೆ ಸರಿದಿದ್ದ ಆಪರೇಷನ್ ಕಮಲ ಚಟುವಟಿಕೆ ಈಗ ತೀವ್ರಗೊಂಡಿದೆ ಎಂಬ ಚರ್ಚೆ ಶುರುವಾಗಿದೆ.ಲೋಕಸಭೆ ಚುನಾವಣೆಯಲ್ಲಿ ಅದ್ಭುತ ಜಯ ದಾಖಲು ಮಾಡಿರುವ ಬಿಜೆಪಿ ಕೇಂದ್ರದಲ್ಲಿ ಸರಕಾರ ರಚನೆ ಮಾಡಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಮೈತ್ರಿ ಸರಕಾರ ಪತನಕ್ಕೆ ಸ್ಕೆಚ್ ರೆಡಿಮಾಡುತ್ತಿದೆ. ರಾಜ್ಯದ ಸರಕಾರದ ಸಂಪುಟ ವಿಸ್ತರಣೆ, ಕೈ ಹಾಗೂ ತೆನೆ ಪಕ್ಷಗಳ ಶಾಸಕರ ಅಸಮಧಾನವನ್ನೇ ಬಿಜೆಪಿ ಟಾರ್ಗೆಟ್ ಮಾಡುತ್ತಿದ್ದು, ಆಯಾ ಶಾಸಕರಿಗೆ ಸದ್ದಿಲ್ಲದೇ ಗಾಳ ಹಾಕುತ್ತಿದೆ ಎಂಬ