ರಾಜ್ಯದ ಸಮ್ಮಿಶ್ರ ಸರ್ಕಾರದ ಪತನದ ಬಗ್ಗೆ ಬಿಜೆಪಿ ನಾಯಕರು ನಿರಂತರವಾಗಿ ಪ್ರತ್ಯೇಕ ಹೇಳಿಕೆ ನೀಡುತ್ತಲೆ ಇದ್ದಾರೆ. ಈ ಸರ್ಕಾರ ಪಥನವಾಗುವುದು ನಿಶ್ಚಿತ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡುತ್ತಾರೋ, ಇಲ್ಲವೋ ಎಂಬುದು ಅನುಮಾನ ಎಂದಿದ್ದಾರೆ.ಕಾಂಗ್ರೆಸ್ನ ಒಳಜಗಳ, ಅತೃಪ್ತಿ, ಅಸಮಾಧಾನಗಳು ಪರಾಕಾಷ್ಠೆ ತಲುಪಿದೆ. ಕಾಂಗ್ರೆಸ್ನ ಕೆಲ ಅತೃಪ್ತ ಶಾಸಕರು ಕಾಂಗ್ರೆಸ್ನ ಹಿರಿಯ ನಾಯಕರ ಸಂಪರ್ಕಕ್ಕೆ ಬರುತ್ತಿಲ್ಲ. ಕಣ್ಮರೆಯಾಗಿದ್ದಾರೆ. ಕಾಂಗ್ರೆಸ್ನ ಕೋಟೆಯೊಳಗೆ ಆವರ ಸೈನಿಕರಿಂದಲೇ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ