ಹೆತ್ತ ಮಗಳನ್ನೇ ಆಕೆ ಅಪ್ರಾಪ್ತಳಾಗಿದ್ದರೂ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ ತಂದೆಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ. ಮಗಳು 14 ವರ್ಷದವಳಾಗಿದ್ದರೆ ತಂದೆ 42 ವರ್ಷದವನು. ಹಲವು ವರ್ಷಗಳ ಕಾಲ ಅಪ್ರಾಪ್ತ ಮಗಳನ್ನು ರೇಪ್ ಮಾಡುತ್ತಲೇ ತಂದೆ ಬಂದಿದ್ದಾನೆ. ಶಾಲೆಯಲ್ಲಿ ಈ ವಿಷಯವನ್ನು ಶಿಕ್ಷಕಿಗೆ ವಿದ್ಯಾರ್ಥಿನಿ ತಿಳಿಸಿದ್ದಾಳೆ. ಆಗ ಶಿಕ್ಷಕಿ ತಡಮಾಡದೇ ಬಾಲಕಿಯ ತಾಯಿಯನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದಾರೆ. ಆಟೋ ಚಾಲಕನಾಗಿರೋ ಕಾಮುಕ ಗಂಡನ ವಿರುದ್ಧ ಹೆಂಡತಿಯೇ ಕೇಸ್ ದಾಖಲು ಮಾಡಿದ್ದಳು.