Widgets Magazine

15 ಜನ ಕುಖ್ಯಾತ ದರೋಡೆಕೋರರ ಬಂಧನ

ರಾಯಚೂರು| Jagadeesh| Last Modified ಶನಿವಾರ, 23 ಮೇ 2020 (19:39 IST)
ಮೂವರು ಕುಖ್ಯಾತ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 15ಕ್ಕೆ ಏರಿದೆ.

ರಾಯಚೂರು ಶಕ್ತಿನಗರ ವ್ಯಾಪ್ತಿಯಲ್ಲಿ ಹರ್ಷನ್ ಎಂಬಾತರ ಮನೆಗೆ ನುಗ್ಗಿದ್ದ 20 ಜನರು ಹಣಕ್ಕಾಗಿ ಬೆದರಿಕೆ ಹಾಕಿದ್ದರು.

ಅಲ್ಲದೇ ಆನ್ ಲೈನ್ ಮೂಲಕ 5 ಲಕ್ಷ ರೂಪಾಯಿ ಪಡೆದುಕೊಂಡಿದ್ದು, ಇನ್ನೂ 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ಕೇಸ್ ದಾಖಲಾಗಿದ್ದೆ ತಡ, ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು ಮೊದಲ ಹಂತದಲ್ಲಿ 12 ಜನರನ್ನು ಮಾಡಿದ್ದರು.

ಈಗ 3 ದರೋಡೆಕೋರರು ಅರೆಸ್ಟ್ ಆಗಿದ್ದಾರೆ. ತಪ್ಪಿಸಿಕೊಂಡ 5 ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.





ಇದರಲ್ಲಿ ಇನ್ನಷ್ಟು ಓದಿ :