ಮೋಜು ಮಸ್ತಿ ಮಾಡಲು ಬೈಕ್ ಕದ್ದು ಮಾರಾಟ ಮಾಡುತ್ತಿದ್ದ ಖದೀಮರ ಜಾಲವನ್ನು ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿ ನಗರ ಹಾಗೂ ಖಾನಾಪುರ ತಾಲೂಕಿನಲ್ಲಿ ಬೈಕ್ ಖದಿಯುತ್ತಿದ್ದ 9 ಜನರನ್ನು ಒಳಗೊಂಡ ಗ್ಯಾಂಗ್ನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ.ಬಂಧಿತರಿಂದ ಒಟ್ಟು 13 ಬೈಕ್ ವಶಪಡಿಸಿಕೊಳ್ಳಲಾಗಿದೆ. ಖಾನಾಪುರದ ಕಿಶನ್ ನಾಯಕ್, ವಿವೇಕ ಅವಲಕ್ಕಿ, ರಾಹುಲ್ ಬುರುಡ, ರಾಮಲಿಂಗ ಸುಳಕರ, ಓಂಕಾರ್ ಕಣಬರಕರ್, ಅಶುತೋಷ ದೇಸಾಯಿ, ಮನಸು ಕುಂಬಾರ್ ಹಾಗೂ ಬೆಳಗಾವಿಯ ವಡಗಾವಿ ನಿವಾಸಿ