ಶಾಲೆಯಲ್ಲಿ ಆಶ್ರಯ ಪಡೆದ ನಿರಾಶ್ರಿತರ ಮೇಲೆ ಅಧಿಕಾರಿಗಳ ದಬ್ಬಾಳಿಕೆ

ಬೆಳಗಾವಿ, ಬುಧವಾರ, 14 ಆಗಸ್ಟ್ 2019 (12:22 IST)

ಬೆಳಗಾವಿ : ಪರಿಹಾರ ಕೇಂದ್ರದಲ್ಲಿದ್ದ ನಿರಾಶ್ರಿತರಿಗೆ ಶಾಲೆ ಖಾಲಿ ಮಾಡಿ ಎಂದು ಧಮ್ಕಿ ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಿರೇಹಟ್ಟಿಹೋಳಿ ಗ್ರಾಮದ ಪರಿಹಾರ ಕೇಂದ್ರದಲ್ಲಿ ನಡೆದಿದೆ.ಪ್ರವಾಹದಿಂದ ಮನೆಮಠ ಕಳೆದುಕೊಂಡು ದುಃಖದಲ್ಲಿರುವ ನೂರಾರು ನಿರಾಶ್ರಿತರು ಈ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಈ ವೇಳೆ ಅಗಸ್ಟ್ 15 ರಂದು ಧ್ವಜಾರೋಹಣ ಮಾಡಬೇಕಿದೆ ಇಂದು ಶಾಲೆ ಬಿಡುವಂತೆ ಪಿಡಿಒ, ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಪೊಲೀಸರ ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.

 

ಅಧಿಕಾರಿಗಳ ಈ ವರ್ತನೆಯಿಂದ ನೊಂದ ನಿರಾಶ್ರಿತರು ಎಲ್ಲಿಗೆ ಹೋಗಬೇಕು ಎಂದು ಕಂಗಲಾಗಿ ದಿಕ್ಕೆ ತೋಚದಂತಾಗಿ ಕಣ್ಣೀರಿಡುತ್ತಿದ್ದಾರೆ. ಅಲ್ಲದೇ ಜಾಗ ಖಾಲಿ ಮಾಡಿಸುತ್ತಿರುವ ಪಿಡಿಒ ಮತ್ತು ಪೊಲೀಸರ ವಿರುದ್ಧ ನಿರಾಶ್ರಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನೆರೆ ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ ಸಿಎಂ ಯಡಿಯೂರಪ್ಪನವರ ಈ ಹೇಳಿಕೆ

ಶಿವಮೊಗ್ಗ : ಪ್ರವಾಹ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದಷ್ಟು ಹಣ ನೀಡಲು ಸರ್ಕಾರದಲ್ಲಿ ನೋಟ್ ...

news

ಫೋನ್ ಟ್ಯಾಪಿಂಗ್ ದೊಡ್ಡ ಅಪರಾಧ- ಆರ್.ಅಶೋಕ್

ಬೆಂಗಳೂರು : ಟೆಲಿಫೋನ್ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಫೋನ್ ಟ್ಯಾಪಿಂಗ್ ದೊಡ್ಡ ಅಪರಾಧ ಎಂದು ...

news

ಕುಮಾರಸ್ವಾಮಿ ನನ್ನ ಫೋನ್ ಕದ್ದಾಲಿಕೆ ಮಾಡಿದ್ದಾರೆ-ಎಚ್.ವಿಶ್ವನಾಥ್ ಆರೋಪ

ಮೈಸೂರು: ಟೆಲಿಫೋನ್ ಕದ್ದಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಎಚ್.ಡಿ.ಕುಮಾರಸ್ವಾಮಿ ನನ್ನ ಫೋನ್ ಕದ್ದಾಲಿಕೆ ...

news

ಮೈತ್ರಿ ಸರ್ಕಾರದ ವೇಳೆ ನಡೆದಿತ್ತಾ ಫೋನ್ ಕದ್ದಾಲಿಕೆ

ಬೆಂಗಳೂರು : ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕೂಟ ಸರ್ಕಾರದ ಅವಧಿಯಲ್ಲಿ ಹಲವು ರಾಜಕೀಯ ಮುಖಂಡರು, ...