ಭಜರಂಗಿ ಆಂಜನೇಯನಿಗೂ ಬಜರಂಗದಳಕ್ಕೂ ಸಂಬಂಧವೇ ಇಲ್ಲ. ಅದೊಂದು ಸಂಸ್ಥೆ ಮಾತ್ರ. ಹೆಸರಿಟ್ಟುಕೊಂಡ ಮಾತ್ರಕ್ಕೆ ಯಾರೂ ರಾಮ, ಕೃಷ್ಣ, ಆಂಜನೇಯ ಆಗಲ್ಲ ಅಂತಾ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನ್ನ ಹೆಸರಿನಲ್ಲೂ ರಾಮ ಅಂತಿದೆ. ನನಗೆ ಯಾರಾದರೂ ಏನಾದರೂ ಅಂದರೆ ಅದು ರಾಮನಿಗೆ ಅವಮಾನ ಮಾಡಿದಂತೆ ಆಗುತ್ತದಾ? ನಾನು ಗೃಹ ಸಚಿವನಾಗಿದ್ದವನು. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರ ಹಾಗೂ PFI ಎರಡೂ ಸಂಘಟನೆಗಳು ಸಹ ಹಲವಾರು