ವಿಧಾನಸಭೆ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಸೆಪ್ಟೆಂಬರ್ ನಲ್ಲಿ ವಿಧಾನಸಭೆ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದ್ದು, ಲೋಕಸಭೆ ಅಧಿವೇಶನ ಮುಗಿದ ನಂತರವಷ್ಟೇ ವಿಧಾನಸಭೆ ಅಧಿವೇಶನ ನಡೆಸುವುದಾಗಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.ಕೋವಿಡ್ ಹಿನ್ನೆಲೆಯಲ್ಲಿ ಪಾರ್ಲಿಮೆಂಟ್ ಅಧಿವೇಶನ ಹೇಗೆ ನಡೆಯಲಿದೆ ಎನ್ನುವುದರ ಮೇರೆಗೆ ಹೇಗೆ ಅಧಿವೇಶನ ನಡೆಸಬೇಕೆಂಬ ತೀರ್ಮಾನ ಮಾಡಲಾಗುವುದು ಎಂದರು.ಪ್ರತಿಪಕ್ಷಗಳು ಅಧಿವೇಶನಕ್ಕೆ ಒತ್ತಾಯಿಸಿದರೂ, ಸಂವಿಧಾನ ಬದ್ಧವಾಗಿ ಆರು ತಿಂಗಳ ಒಳಗಾಗಿ