ತುಮಕೂರು :ಕೇಂದ್ರ ಹಾಗು ರಾಜ್ಯ ಸರ್ಕಾರವು ಜಂಟಿಯಾಗಿ ಉಂಡೆ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ಕೆಲವು ಬಿಜೆಪಿ ಕಾರ್ಯಕರ್ತರು ಬಿಜೆಪಿ ಬಾವುಟವನ್ನು ಧರಿಸಿಕೊಂಡು ಬಂದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಬಾವುಟದೊಂದಿಗೆ ಆಗಮಿಸುವುದನ್ನು ವಿರೋಧಿಸಿದರು. ಇದಕ್ಕೆ ಕೆರೆಳಿದ ಬಿಜೆಪಿ ಕಾರ್ಯಕರ್ತರು ಬೇಕಿದ್ದರೆ ನೀವೂ ಕೂಡ ಹಾಕಿಕೊಂಡು ಬನ್ನಿ ಎಂದು ಕೈ ಕಾರ್ಯಕರ್ತರ ಕಾಲೆಳೆದರು. ಇಲ್ಲಿಂದ ಮಾತಿನ ಚಕಮಕಿ ತೀವ್ರ ಹಂತಕ್ಕೆ ತಲುಪಿತು.