ಬೆಂಗಳೂರು : ಅಪರೆಷನ್ ಕಮಲ ಆಡಿಯೋ ಬಹಿರಂಗಗೊಂಡ ಹಿನ್ನಲೆಯಲ್ಲಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ. ದೋಸ್ತಿಗಳ ಕಿತ್ತಾಟ ಎಲ್ಲೆಡೆ ಕಂಡುಬರ್ತಿದೆ. ಜಗಜ್ಜಾಹೀರಾಗಿದೆ. ಇದನ್ನು ಎನ್ಕ್ಯಾಶ್ ಮಾಡ್ಕೊಳ್ಳೋದು ಬಿಟ್ಟು ನೀವು ಮಾಡ್ತಿರೋದೇನು..? ನೀವು ಬಿರುಕು ದೊಡ್ಡದು ಮಾಡೋದು ಬಿಟ್ಟು ತೇಪೆ ಹಚ್ತಿದ್ದೀರಿ. ಇದರಿಂದ ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಮುಜುಗರ ತರ್ತಾ ಇದ್ದೀರಿ ಎಂದು ಕಿಡಿಕಾರಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಬರೀ ಇದರಲ್ಲೇ ಮುಳುಗಿದ್ರೆ, ಪಕ್ಷ ಸಂಘಟನೆ ಯಾವಾಗ ಮಾಡೋದು,