ಕಳೆದ ಲೋಕಸಭಾ ಚುನಾವಣೆಯ ಜೆ.ಡಿ.ಎಸ್ ಅಭ್ಯರ್ಥಿ ಎ.ಕೃಷ್ಣಪ್ಪರನ್ನು ಜನತಾ ದಳದ ಮುಖಂಡರೇ ಅನ್ಯಾಯ ವಾಗಿ ಕೊಂದಿದ್ದಾರೆ ಅಂತ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಗಂಭೀರ ಆರೋಪ ಮಾಡಿದ್ದಾರೆ.ಅಂದು ಜೆ.ಡಿ.ಎಸ್.ರಾಜ್ಯಾಧ್ಯಕ್ಷರೂ ಆದ ಎ.ಕೃಷ್ಣಪ್ಪರನ್ನ ಗೆಲ್ಲಿಸ್ತೇವೆ ಅಂತಾ ತುಮಕೂರಿಗೆ ಕರೆದುಕೊಂಡು ಬಂದು ಅವರ ಸಾವಿಗೆ ಕಾರಣರಾಗಿದ್ದಾರೆ. ಜಾತಿ ಪ್ರೇಮ ಮೆರೆದ ಜೆ.ಡಿ.ಎಸ್ ನ ಒಕ್ಕಲಿಗ ಮುಖಂಡರು ಅಂದು ಲಕ್ಕಪ್ಪ, ಇಂದು ಮುದ್ದಹನುಮೇಗೌಡ ಎಂದು ಕರಪತ್ರ ಹಂಚಿ ಕಾಂಗ್ರೆಸ್ ನ ಮುದ್ದಹನುಮೇಗೌಡರ ಪರ ಮತಯಾಚನೆ ಮಾಡಿದ್ರು.