ಪರಿವರ್ತನಾ ಯಾತ್ರೆ ಮಾಡುವ ಮೊದಲು ಬಿಜೆಪಿ ನಾಯಕರು ತಮ್ಮ ನಡುವಳಿಕೆಯನ್ನು ಬದಲಾಯಿಸಿಕೊಂಡು, ಆಚಾರ-ವಿಚಾರ ಹಾಗೂ ಸಿದ್ಧಾಂತಗಳನ್ನು ಪಾಲನೆ ಮಾಡಲಿ. ಆಗ ಜನರು ಅವರಿಗೆ ಮನ್ನಣೆ ನೀಡುತ್ತಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಐದು ವರ್ಷದ ಆಡಳಿತ ನಡೆಸಿದ ಸಂದರ್ಭದಲ್ಲಿ ಬಿಜೆಪಿಯವರು ಏನೆಲ್ಲಾ ಮಾಡಿದ್ದಾರೆ ಎಂಬುದು ಜನತೆ ನೋಡಿದ್ದಾರೆ. ಆದ್ದರಿಂದ ಅವರು ಪರಿವರ್ತನೆಯಾಗಬೇಕು ಎಂದು ತಿಳಿಸಿದ್ದಾರೆ. ಟೀಕೆ