ನೀರಾವರಿ ಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದ ಬಿಜೆಪಿ, ಕಾಂಗ್ರೆಸ್ ಶಾಸಕರು

ಬೆಂಗಳೂರು, ಗುರುವಾರ, 6 ಡಿಸೆಂಬರ್ 2018 (13:58 IST)

ಬೆಂಗಳೂರು : ಇಂದು ನಡೆದ ನೀರಾವರಿ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಮುಖಂಡ ಅವರನ್ನು ಕಾಲೆಳೆದು ಹಾಸ್ಯ ಚಟಾಕಿ ಹಾರಿಸಿದ್ದಾರೆ.


ವಿಧಾನಸೌಧದಲ್ಲಿ ಇಂದು ಸಿಎಂ ಕುಮಾರಸ್ವಾಮಿ ಅವರು ನೀರಾವರಿ ಸಭೆ ಕರೆದಿದ್ದರು. ಆ ವೇಳೆ ಸಭೆಗೆ ಆಗಮಿಸಿದ ಎಚ್.ಕೆ.ಪಾಟೀಲ್, ಕೆ.ಎಸ್.ಈಶ್ವರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಎಂ.ಬಿ.ಪಾಟೀಲ್ ಜೊತೆಯಲ್ಲ  ಕುಳಿತು ಮಾತುಕತೆಯಲ್ಲಿ ತೊಡಗಿದ್ದರು. ಇದನ್ನು ಗಮನಿಸಿದ ಸಚಿವ ಡಿ.ಕೆ.ಶಿವಕುಮಾರ್ ಅವರು, “ಅವರನ್ನ ಕರೆದುಕೊಂಡು ಹೋಗುವುದಕ್ಕೆ ತೀರ್ಮಾನ ಮಾಡಿದ್ದೀರಾ” ಎಂದು ಕೆ.ಎಸ್.ಈಶ್ವರಪ್ಪ ಅವರ ಕಾಲೆಳೆದಿದ್ದಾರೆ.


ತಕ್ಷಣವೇ ಡಿ.ಕೆ.ಶಿವಕುಮಾರ್ ಅವರಿಗೆ ಉತ್ತರ ಕೊಟ್ಟ ಈಶ್ವರಪ್ಪ ಅವರು,”ಒಂದು ಪರ್ಸೇಂಟ್ ಆದ್ರೂ ಯಶಸ್ವಿ ಆಗುತ್ತೆ ಅಂತ ನಿನಗೆನಾದ್ರು ನಂಬಿಕೆ ಇದೆಯೇನಪ್ಪಾ” ಎಂದು ಪ್ರಶ್ನೆದರು. ಹಾಗೇ ಮಾತು ಮುಂದುವರೆಸಿ ‘ಎಚ್.ಕೆ. ಪಾಟೀಲ್ ಅವರನ್ನಾದರೂ ಕರೆದುಕೊಂಡು ಹೋಗಬಹುದು ಅಂತ ನಂಬಬಹುದು. ಆದರೆ ಎಂ.ಬಿ.ಪಾಟೀಲ್ ಅವರನ್ನು ಕರೆದುಕೊಂಡು ಹೋಗಲು ಸಾಧ್ಯವೇ” ಎಂದು ಪ್ರಶ್ನಿಸಿ  ಹಾಸ್ಯ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೋಜಿಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದವರ ಬಂಧನ

ಮೋಜು ಮಾಡಲು ಬೈಕ್‌ಗಳನ್ನು ಕಳವು ಮಾ‌ಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

news

ಆರ್ ಟಿ ಇ ಅಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ಮಕ್ಕಳಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು : ಆರ್ ಟಿ ಇ ಅಡಿ ಶುಲ್ಕ ವಿನಾಯತಿ ಮೂಲಕ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ಮಕ್ಕಳ ...

news

ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು- ಕಂಪ್ಲಿ ಶಾಸಕ ಗಣೇಶ್

ಬೆಂಗಳೂರು : ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಕಂಪ್ಲಿ ಶಾಸಕ ಗಣೇಶ್ ತಮ್ಮ ಆಸೆಯನ್ನು ...

news

ಎಚ್ಐವಿ ಪೀಡಿತೆ ಆತ್ಮಹತ್ಯೆ ಮಾಡಿಕೊಂಡಳೆಂದು ಕೆರೆಯ ನೀರನ್ನೇ ಖಾಲಿ ಮಾಡಿಸಿದ ಗ್ರಾಮಸ್ಥರು!

ಧಾರವಾಡ: ಎಚ್ಐವಿ ಬಗ್ಗೆ ಇನ್ನೂ ಜನರಿಗೆ ಸರಿಯಾದ ತಿಳುವಳಿಕೆ ಬಂದಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ...