ಬಿಜೆಪಿ ಮೂಲತಃ ರೈತ ಮತ್ತು ಯುವಜನ ವಿರೋಧಿ –ಸಿದ್ದರಾಮಯ್ಯ ಕಿಡಿ

ಬೆಂಗಳೂರು| pavithra| Last Modified ಶುಕ್ರವಾರ, 20 ಡಿಸೆಂಬರ್ 2019 (08:51 IST)
ಬೆಂಗಳೂರು : ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟಿಸಿದವರ ವಿರುದ್ಧ ಗೋಲಿಬಾರ್ ನಡೆಸಿದ ಹಿನ್ನಲೆಯಲ್ಲಿ ಬಿಜೆಪಿ ಮೂಲತಃ ಮತ್ತು ಯುವಜನ ವಿರೋಧಿ ಎನ್ನುವುದು ಸಾಬೀತಾಗಿದೆ ಎಂದು ಕಿಡಿಕಾರಿದ್ದಾರೆ.ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ತೀವ್ರವಾಗಿದ್ದು, ಇಬ್ಬರು ಪ್ರತಿಭಟನಾಕಾರರು ಪೊಲೀಸರ ದಾಳಿಗೆ ಬಲಿಯಾಗಿದ್ದಾರೆ.


ಈ ಬಗ್ಗೆ ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಮೊದಲ ಬಾರಿಗೆ ಯಡಿಯೂರಪ್ಪ ಸಿಎಂ ಆದಾಗ ಇಬ್ಬರು ರೈತರು ಗುಂಡಿಗೆ ಆಹುತಿಯಾಗದ್ದರು. ಈಗ ಎರಡನೇ ಬಾರಿ ಸಿಎಂ ಆದಾಗ ಇಬ್ಬರು ಯುವಕರು ಗುಂಡಿಗೆ ಬಲಿಯಾಗಿದ್ದಾರೆ. ಆ ಮೂಲಕ ಬಿಜೆಪಿ ಮೂಲತಃ ರೈತ ಮತ್ತು ಯುವಜನ ವಿರೋಧಿ ಎನ್ನುವುದು ಸಾಬೀತಾಗಿದೆ ಎಂದು ಕಿಡಿಕಾರಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :