ಹುಲಿ ಉಗುರಿನ ಪೆಂಡೆಂಟ್, ಡಾಲರ್ ಮತ್ತು ಲಾಕೆಟ್ ಧರಿಸಿದವರನ್ನು ಅಥವಾ ಮನೆಯಲ್ಲಿಟ್ಟುಕೊಂಡವರನ್ನು ಅರಣ್ಯಾಧಿಕಾರಿಗಳು ಬಂಧಿಸಿ ಜೈಲಿಗೆ ಕಳಿಸುತ್ತಿರುವ ಬಗ್ಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಹುಲಿಯೊಂದನ್ನು ಕೊಲ್ಲುತ್ತಿರುವ ಪೋಟೋಗಳನ್ನು ಅನೇಕ ಜನ ತಮ್ಮ ಮನೆಗಳಲ್ಲಿ ತೂಗು ಹಾಕಿದ್ದಾರೆ. ಅದು ವನ್ಯಜೀವಿ ಸಂರಕ್ಷಣೆ ಕಾಯ್ದೆ ಉಲ್ಲಂಘನೆಯಲ್ಲವೇ? ಅದನ್ನು ನೋಡಿ ಬೇರೆ ಜನ ಹುಲಿಗಳನ್ನು ಬೇಟೆಯಾಡಲು ಮುಂದಾದರೆ ಹೇಗೆ? ಎಂದು