ವ್ಯಕ್ತಿಯೊಬ್ಬನ ಕಣ್ಣುಗಳನ್ನು ಕಿತ್ತು ಹಾಕಿ ಕೊಲೆ ಮಾಡಿದ ಬಳಿಕ ಆತನ ದೇಹವನ್ನು ನೇಣಿಗೆ ಹಾಕಿದ ಕ್ರೂರ ಘಟನೆ ನಡೆದಿದೆ. ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದ ರವಿ ಎಂಬಾತನನ್ನು ಆತನ ಮನೆಯಲ್ಲೇ ಭೀಕರವಾಗಿ ಕೊಲೆ ಮಾಡಲಾಗಿದ್ದು, ಕೊಲೆ ಬಳಿಕ ಆತ್ಮಹತ್ಯೆಎಂಬಂತೆ ಬಿಂಬಿಸೋಕೆ ಯತ್ನಿಸಲಾಗಿದೆ. ಭೋಪಾಲ್ ನ ಮನಪುರದಲ್ಲಿ ಘಟನೆ ನಡೆದಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ರವಿ ವಾಸವಾಗಿದ್ದನು. ಕೊಲೆ ನಡೆದ ದಿನ ಪತ್ನಿ ಹಾಗೂ ಮಕ್ಕಳು ಬೇರೆಯವರ ಮನೆಗೆ ಹೋಗಿದ್ದರು.