ಬಸ್ ತಡೆದು ವಿದ್ಯಾರ್ಥಿಗಳು, ಊರಿನ ಜನರು ಮಾಡಿದ್ರು ಇಂಥ ಕೆಲಸ

ಹುಬ್ಬಳ್ಳಿ, ಬುಧವಾರ, 9 ಅಕ್ಟೋಬರ್ 2019 (17:11 IST)

ಸರಿಯಾದ ಸಮಯಕ್ಕೆ ಸಾರಿಗೆ ಬಸ್ ಬಿಡುತ್ತಿಲ್ಲ ಎಂದು ಆಗ್ರಹಿಸಿ ರಸ್ತೆಯನ್ನು ತಡೆದು ಶಾಲಾ - ಕಾಲೇಜು ವಿದ್ಯಾರ್ಥಿಗಳು ಧರಣಿ ನಡೆಸಿದ್ದಾರೆ.

ಹುಬ್ಬಳ್ಳಿಯ ಇಂಗಳಗಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಪ್ರತಿ ದಿನ ಸರಿಯಾದ ಸಮಯಕ್ಕೆ ಬಸ್ ಬರದೇ ಇರುವ ಕಾರಣ ಶಾಲಾ - ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ಹೋಗಲಾಗುತ್ತಿಲ್ಲ. ಪರಿಣಾಮ ಕಲಿಕೆಗೆ ತೊಂದರೆಯಾಗುತ್ತಿದೆ. ಅಲ್ಲದೇ ಶಾಲಾ - ಕಾಲೇಜುಗಳ ಆಡಳಿತ ಮಂಡಳಿಯಿಂದ ಬೈಯಿಸಿಕೊಳ್ಳುವಂತಾಗಿದೆ.‌

ಗ್ರಾಮದ ಜನರು ಕೆಲಸಕ್ಕೆ ಹೋಗಬೇಕೆಂದರೂ ಇದೇ ಸಮಸ್ಯೆ ಎದುರಾಗುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಅಂತ ಜನರು ಎಚ್ಚರಿಸಿದ್ದಾರೆ.  
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನರಭಕ್ಷಕ ಹುಲಿ ಪಡೆದ ಬಲಿ ಎಷ್ಟು ಗೊತ್ತಾ?

ಹುಲಿ ದಾಳಿಗೆ ಆ ಪ್ರದೇಶದಲ್ಲಿ ಎರಡನೇ ಬಲಿ ಬಿದ್ದಿದೆ.

news

ಕ್ವಿಂಟಲ್ ಕ್ವಿಂಟಲ್ ಟೊಮೆಟೊ ರಸ್ತೆಗೆ ಸುರಿದ ಬೆಳೆಗಾರ

ಸರಕಾರ ಹಾಗೂ ಕೃಷಿ ಇಲಾಖೆ ಆಕ್ರೋಶಗೊಂಡಿರೋ ಬೆಳೆಗಾರರು ಟೊಮೆಟೊ ರಸ್ತೆಗೆ ಸುರಿದು ಕಿಡಿಕಾರಿದ್ದಾರೆ.

news

ಮಹಿಳೆ ಮೇಲೆ ಜಮೀನಿನಲ್ಲಿ ನಡೆಯಿತು ಆ ಕೆಲಸ

ಮಹಿಳೆಯರು ಅನ್ನೋದನ್ನು ಮರೆತು ವಿರೋಧಿಗಳು ಮಾಡಬಾರದ ಕೆಲಸ ಮಾಡಿದ್ದಾರೆ.

news

ಬಿಎಸ್ ವೈ ಮಾಸ್ಟರ್ ಪ್ಲ್ಯಾನ್ : ಅನರ್ಹ ಶಾಸಕರು ಫುಲ್ ಖುಷ್

ಅನರ್ಹ ಶಾಸಕರಿಗೆ ತೊಡಕಾಗಬಹುದಾಗಿದ್ದ ದಾರಿಯನ್ನು ಸಲೀಸು ಮಾಡೋ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಮಾಸ್ಟರ್ ...