ಬೆಂಗಳೂರು: ಓಎಲ್ಎಕ್ಸ್ನಲ್ಲಿ ಮಾರಾಟಕ್ಕಿಟ್ಟಿದ್ದ ಕಾರೊಂದನ್ನು ಟೆಸ್ಟ್ ಡ್ರೈವ್ ನೆಪದಲ್ಲಿ ಮಾಲಿಕನಿಂದ ಪಡೆದು ಪರಾರಿಯಾಗಿದ್ದ ಖತರ್ನಾಕ್ ಕಳ್ಳ ಅಮೃತಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಅಮೃತ ನಗರದ ನಿವಾಸಿ ಎಂ.ಜಿ.ವೆಂಕಟೇಶ್ ನಾಯ್ಕ (36) ಬಂಧಿತ. ಈತನಿಂದ ಕಾರು ಹಾಗೂ ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. ಕಳೆದ ಜ.30ರಂದು ಹೆಬ್ಬಾಳ ಕಾಫಿಬೋರ್ಡ್ ಲೇಔಟ್ ನಿವಾಸಿ ಎಂಜಿನಿಯರ್ ರವೀಂದ್ರ ಇಲೂರಿ ಅವರ ಬ್ರೀಜಾ ಕಾರನ್ನು ಖರೀದಿಸುವ ನೆಪದಲ್ಲಿ ಟೆಸ್ಟ್ ಡ್ರೈವ್ ಮಾಡುವುದಾಗಿ ಕಾರು