ಬೆಂಗಳೂರು : ಸಾಲಕ್ಕೆ ಸಿಗರೇಟ್ ಕೊಡುವುದಿಲ್ಲವೆಂದು ಹೇಳಿದ್ದಕ್ಕೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಕಿಡಿಗೇಡಿಗಳ ಗ್ಯಾಂಗ್ ವೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ನಗರ ಹೊರವಲಯದ ಕೆ.ಆರ್.ಪುರದಲ್ಲಿ ನಡೆದಿದೆ. ಕುಂದಾಪುರ ಮೂಲದ ಅಭಿನವ್ ಹಲ್ಲೆಗೆ ಒಳಗಾದ ಯುವಕ. ಕೆ.ಆರ್.ಪುರದ ಸೆಂಟ್ ಅಂತೋನಿ ಸ್ಕೂಲ್ ರಸ್ತೆಯಲ್ಲಿರುವ ಬೇಕರಿಯಲ್ಲಿ ಅಭಿನವ್ ಕೆಲಸ ಮಾಡುತ್ತಿದ್ದ. ಅಲ್ಲಿಗೆ ಪುಂಡರ ಗ್ಯಾಂಗೊಂದು ಬಂದು ಸಾಲಕ್ಕೆ ಸಿಗರೇಟ್ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಅಭಿನವ್ ಒಪ್ಪದಿದ್ದಾಗ ಕೋಪಗೊಂಡ ಗ್ಯಾಂಗ್