ರಾಜ್ಯದ ಮುಖ್ಯಮಂತ್ರಿ ಆದವರು ತಮ್ಮ ಸ್ಥಾನದ ಜವಾಬ್ದಾರಿ ಮರೆತು ಹೇಳಿಕೆ ನೀಡಿದ್ದಾರೆ ಎಂದು ಸಿಎಂ ಹೇಳಿಕೆಗೆ ಬಿಜೆಪಿ ಹಿರಿಯ ಶಾಸಕ ಬಿ.ಶ್ರೀರಾಮುಲು ತಿರುಗೇಟು ನೀಡಿದ್ದಾರೆ.ಚಿತ್ರದುರ್ಗದಲ್ಲಿ ಬಿ.ಶ್ರೀರಾಮುಲು ಹೇಳಿಕೆ ನೀಡಿದ್ದು, ಸಿಎಂ ಅವರು ಅವರ ಪಕ್ಷದ ಕಾರ್ಯಕರ್ತನ ಕೊಲೆಯಾಗಿದೆ ಅನ್ನೋ ಕಾರಣಕ್ಕೆ ಉದ್ವೇಗದಿಂದ ಶೂಟ್ ಔಟ್ ಮಾಡಿ ಎಂದಿದ್ದಾರೆ. ಆದರೆ ರಾಜ್ಯದಲ್ಲಿ ನೂರಾರು ಹಿಂದು ಯುವಕರ ಹತ್ಯೆಗಳು ಆದಾಗ ಈ ಶಬ್ದ ಬಳಸಿಲ್ಲ.ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರು ಈ ರೀತಿ ಮಾತನಾಡುವುದನ್ನ ಖಂಡಿಸುತ್ತೇನೆ