ವಿಮಾನ ನಿಲ್ದಾಣವನ್ನು ಸಿಎಂ ಲೋಕಾರ್ಪಣೆಗೊಳಿಸಿದ್ರೆ, ಅಲ್ಲಿನ ದೇವರನ್ನು ಅಧಿಕಾರಿಗಳು ಮಾಯ ಮಾಡಿರೋ ಆರೋಪ ಕೇಳಿಬಂದಿದೆ. ಕಲಬುರಗಿ ವಿಮಾನ ನಿಲ್ದಾಣದಿಂದ ವಾಣಿಜ್ಯ ಕಾರ್ಯಾಚರಣೆ ಕೈಗೊಳ್ಳುವ ಪೂರ್ವ ಡಿಜಿಸಿಎ ನಿರ್ದೇಶನದಂತೆ ಸುರಕ್ಷತಾ ದೃಷ್ಠಿಯಿಂದ ರನ್ ವೇಗೆ ತುಂಬಾ ಹತ್ತಿರದಲ್ಲಿದ್ದ ಧಾರ್ಮಿಕ ದೇವಸ್ಥಾನವನ್ನು ಸುರಕ್ಷತಾ ದೃಷ್ಟಿಯಿಂದ ತೆರವುಗೊಳಿಸಿ ಧಾರ್ಮಿಕ ವಿಧಿ-ವಿಧಾನದಂತೆ ವಿಗ್ರಹವನ್ನು ಜಲಕ್ಕೆ ಸಮರ್ಪಿಸಲಾಗಿದೆ ಎಂದು ವಿಮಾನ ನಿಲ್ದಾಣಗಳ ಪ್ರಾಧಿಕಾರ ( ಎಎಐ) ಸ್ಪಷ್ಟಪಡಿಸಿದೆ.ಕಲಬುರಗಿ ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸಿದ ನಂತರ