ಬೆಂಗಳೂರು- ನಗರದಲ್ಲಿ ಮಾಜಿ ಸಚಿವ ಜಿ ಟಿ ದೇವೇಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು,ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಮೂಲಕ ಬಹಳ ತಪ್ಪು ಮಾಹಿತಿ ಜನರಿಗೆ ಕೊಟ್ಟಿದ್ದಾರೆ.ಎಸ್ ಸಿ ಎಸ್ ಟಿ ಗೆ 30 ಸಾವಿರ ಕೋಟಿ ಕೊಟ್ಟಿದ್ದೀವಿ ಅಂತಾ ಸುಳ್ಳು ಹೇಳಿದ್ದಾರೆ.ಜಲಜೀವನ್, ನರೇಗಾ ಇವೆಲ್ಲಾ ಕೇಂದ್ರ ಸರ್ಕಾರ ಮಾಡೋದು ಕೇಂದ್ರ ಸರ್ಕಾರವನ್ನ ಟೀಕೆ ಮಾಡಿದ್ದಾರೆ ಹೊರತು ಕೇಂದ್ರ ಸರ್ಕಾರದ ಯೋಜನೆಗಳನ್ನ ಹೇಳಿಲ್ಲ.ಐದು ಗ್ಯಾರಂಟಿಗಳ ಬಗ್ಗೆಯಷ್ಟೇ ಹೇಳಿದ್ದಾರೆ.ಹೊಸತೇನೂ ಇಲ್ಲ.ಅನುದಾನ ಖಾಲಿಯಾಗಿದೆ, ಕೇಂದ್ರದ ಮೇಲೆ ಹೇಳೋದನ್ನ ಪರಿಪಾಠ ಮಾಡಿಕೊಂಡಿದ್ದಾರೆ.