ಹೂತಿದ್ದ ಶವದ ತಲೆಬುರುಡೆ ಮತ್ತು ಎರಡೂ ಕೈಗಳ ಮೂಳೆಯನ್ನು ಕಳವು ಮಾಡಿರುವ ಹೇಯ ಘಟನೆ ತಾಲ್ಲೂಕಿನ ಫರಹತಾಬಾದ್ ಗ್ರಾಮದಲ್ಲಿ ಶನಿವಾರ- ಭಾನುವಾರದ ನಡುವಿನ ರಾತ್ರಿ ನಡೆದಿದೆ. ಗ್ರಾಮದ ನಿವಾಸಿ ವಿರೂಪಾಕ್ಷಪ್ಪ ಕಳೆದ ಏಳು ತಿಂಗಳ ಹಿಂದೆ ಸಾವನ್ನಪ್ಪಿದ್ದು, ಗ್ರಾಮದ ಹೊರವಲಯದ ಸ್ಮಶಾನದಲ್ಲಿ ಅವರನ್ನು ಹೂಳಲಾಗಿತ್ತು. ಶನಿವಾರ ಅಮಾವಾಸ್ಯೆ ಹಿಂದಿನ ರಾತ್ರಿ ಅವರ ಶವವನ್ನು ಅಗೆದ ದುಷ್ಕರ್ಮಿಗಳು ತಲೆಬುರುಡೆ ಮತ್ತು ಮೂಳೆಯನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ. ನಿನ್ನೆ ಅಮವಾಸ್ಯೆ ನಿಮಿತ್ತ