j ಕಳೆದ 23 ವರುಷಗಳಿಂದ ಬಾಕಿ ಇದ್ದ ಪಾಲುವಾಟನಿ ದಾವೆ ಜನತಾ ನ್ಯಾಯಾಲಯದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥವಾಯಿತು. ಅದೇ ರೀತಿ ಬಸವನಬಾಗೇವಾಡಿ ನ್ಯಾಯಾಲಯದಲ್ಲಿ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದ ಎರಡೂ ಜೋಡಿಗಳನ್ನು ಜನತಾ ನ್ಯಾಯಾಲಯವು ರಾಜೀ ಸಂಧಾನದ ಮೂಲಕ ಒಂದು ಮಾಡಿದ್ದು ಸಹ ಮತ್ತೊಂದು ವಿಶೇಷ. ಕಕ್ಷಿದಾರರು ಹಾಗೂ ವಕೀಲರ ಸಹಕಾರದಿಂದ ಆಸ್ತಿಯ ವಿಭಾಗ ಕೋರಿದ 114 ದಾವೆಗಳು, 94 ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ