ಪ್ರಕರಣದ ವಿಚಾರಣೆಗೆಂದು ಕೋರ್ಟ್ ಮೆಟ್ಟಿಲೇರಿವೆ 13 ಗಿಳಿಗಳು

ನವದೆಹಲಿ| pavithra| Last Modified ಶುಕ್ರವಾರ, 18 ಅಕ್ಟೋಬರ್ 2019 (10:03 IST)
ನವದೆಹಲಿ : ದೆಹಲಿ ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆಗೆ ಸಂಬಂಧಪಟ್ಟಂತೆ 13 ಗಿಳಿಗಳನ್ನು ಹಾಜರುಪಡಿಸಿದಂತಹ ವಿಚಿತ್ರ ಘಟನೆ ನಡೆದಿದೆ.
ಹೌದು. ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ 13 ಗಿಳಿಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ. ವನ್ಯಜೀವಿಯ ಕಾಯ್ದೆಯ ಪ್ರಕಾರ ಗಿಳಿಗಳನ್ನು ರಪ್ತು ಮಾಡುವಂತಿಲ್ಲ. ಆದಕಾರಣ  ಗಿಳಿಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ಆರೋಪಿಯನ್ನು ಸಿಐಎಸ್ ಎಫ್  ಸಿಬ್ಬಂದಿ ಬಂಧಿಸಿದ್ದಾರೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ನ್ಯಾಯಲಯದ ಮುಂದೆ ಹಾಜರುಪಡಿಸುವಾಗ ಅದಕ್ಕೆ ಸಂಬಂಧಪಟ್ಟ ಸಾಕ್ಷ್ಯವನ್ನು ನ್ಯಾಯಲಯದ ಮುಂದೆ ಇಡಬೇಕು. ಆದ್ದರಿಂದ ಈ ಗಿಳಿಗಳನ್ನು ನ್ಯಾಯಲಯಕ್ಕೆ ಹಾಜರುಪಡಿಸಬೇಕಾಯಿತು ಎನ್ನಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :