ಶ್ರೀರಾಮ ಮಹಾದೇಗುಲ ನಿರ್ಮಾಣಕ್ಕೆ ಭಾಗವತ್ ಆಗ್ರಹ

ನಾಗಪುರ| Jagadeesh| Last Modified ಶುಕ್ರವಾರ, 19 ಅಕ್ಟೋಬರ್ 2018 (21:27 IST)
ರಾಮಜನ್ಮಭೂಮಿಯ ವಿವಾದವನ್ನು ಪರಿಹರಿಸಿ ಶ್ರೀರಾಮ ಮಹಾದೇಗುಲ ನಿರ್ಮಿಸಲು ಅನುಕೂಲ ಮಾಡಿಕೊಡುವಂತೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆಗ್ರಹಿಸಿದ್ದಾರೆ.
ಶ್ರೀರಾಮ ನಿರ್ಮಾಣಕ್ಕೆಆಗ್ರಹ ಮಾಡಿರುವ ಅವರು, ರಾಮ ಜನ್ಮಭೂಮಿ ಆಂದೋಲನದ ಪಾಲುದಾರರಾಗಿರುವ ಶ್ರೀ ರಾಮನ ಜನ್ಮಸ್ಥಳದಲ್ಲಿ ದೇವಾಲಯವನ್ನು ಬೇಗನೆ ಮಾಡಬೇಕು. ಈ ಕುರಿತು ಕೇಂದ್ರ ಸರಕಾರ ಶೀಘ್ರ ನಿರ್ಣಯ ಕೈಗೊಳ್ಳಬೇಕು ಎಂದಿದ್ದಾರೆ.

ಶ್ರೀರಾಮ ಮಹಾದೇಗುಲ ನಿರ್ಮಾಣ ಸಂಬಂಧ ಸರಕಾರ ಕಾನೂನನ್ನು ತರಬೇಕು. ಈ ವಿಷಯದಲ್ಲಿ ನಾವು ಸಂತರು ಮತ್ತು ಮಹಾತ್ಮರೊಂದಿಗೆ ಇದ್ದೇವೆ ಎಂದು ಅವರು ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :