ಕಲಬುರಗಿ: ಸಾವಿಗೆ ಹೆದರದ ಜನರು ಕನಸಿಗೆ ಹೆದರುತ್ತಾರೆ ಎನ್ನುವುದಕ್ಕೆ ನಿದರ್ಶನವೆಂಬಂತೆ ಕಲಬುರುಗಿಯ ಕೋಟನೂರು ಗ್ರಾಮದಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿದೆ. ಅದೇನೆಂದರೆ ಕಲಬುರಗಿಯ ಕೋಟನೂರು ಗ್ರಾಮದ ನಿವಾಸಿ ವಿಜಯ್ ಕುಮಾರ್ ಎಂಬಾತ ಕನಸಿಗೆ ಹೆದರಿ ಗುಂಡಿಯಲ್ಲಿ ಹೋಗಿ ಕುಳಿತುಕೊಂಡಿದ್ದ. ಆತನಿಗೆ ರಾತ್ರಿ ಕನಸಿನಲ್ಲಿ ಮಣ್ಣಿನಲ್ಲಿ ಹುದುಗಿಕೊಂಡು ಅನುಷ್ಠಾನಕ್ಕೆ ಕುಳ್ಳಿತುಕೊಳ್ಳಬೇಕು ಎಂದು ದೇವಿಯ ಪ್ರೇರಣೆಯಾಗಿದ್ದು, ಒಂದುವೇಳೆ ಅನುಷ್ಠಾನಕ್ಕೆ ಕೂರದಿದ್ದರೆ ನಿನಗೆ ಸಾವು ಬರುತ್ತದೆ ಎಂದು ದೇವಿ ಹೇಳಿದ ಹಾಗೆ ಕನಸು ಬಿದ್ದಿತ್ತು.