ಅಮಿತ್ ಶಾ ಕಾರ್ಯಕ್ರಮಕ್ಕೆ ಮೂಲ ಬಿಜೆಪಿ ಕಾರ್ಯಕರ್ತರನ್ನು ಕಡೆಗಣನೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್ ವಿರುದ್ದ ಸೊಗಡು ಶಿವಣ್ಣ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದಗಂಗಾ ಮಠದ ಆವರಣದಲ್ಲಿ ಆಕ್ರೋಶ ಹೊರಹಾಕಿದ ಸೊಗಡು ಬೆಂಬಲಿಗರು.ಪಾಸ್ ವಿತರಣೆ ಯಲ್ಲಿ ತಾರತಮ್ಯ ಆರೋಪ ಕೇಳಿ ಬಂದಿದೆ . ಸೊಗಡು ಶಿವಣ್ಣ ಬೆಂಬಗಲಿಗೆ ಪಾಸ್ ನೀಡದೇ ತಾರತಮ್ಯ ಮಾಡಿದ ಆರೋಪ ಇದಾಗಿದೆ. ಪೊಲೀಸರು-ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.