ಬಾಡಿಗೆ ಕೇಳಿದರೆ ಮನೆ ಓನರ್ ಮೇಲೆ ಕೇಸ್ ಹಾಕುವೆ ಎಂದ ಜಿಲ್ಲಾಧಿಕಾರಿ

ಉಡುಪಿ| Jagadeesh| Last Modified ಬುಧವಾರ, 8 ಏಪ್ರಿಲ್ 2020 (20:07 IST)
ಮಾರ್ಚ್ ಹಾಗೂ ಏಪ್ರಿಲ್ ಬಾಡಿಗೆ ಶುಲ್ಕವನ್ನು ಕೇಳಿದರೆ ಮನೆ ಮಾಲಿಕರ ಲೈಸನ್ಸ್ ರದ್ದು ಮಾಡೋದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ -2019 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಿಆರ್‍ಪಿಸಿ ಸೆಕ್ಷನ್ 144(3) ರಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಶೆಡ್ ಹಾಗೂ ಬಾಡಿಗೆ ಮನೆಗಳಲ್ಲಿ ವಾಸವಿರುವ ಕಾರ್ಮಿಕರಿಂದ ಮಾರ್ಚ್, ಏಪ್ರಿಲ್ ತಿಂಗಳ ಬಾಡಿಗೆ ಶುಲ್ಕವನ್ನು ಮನೆ ಮಾಲೀಕರು ವಸೂಲು ಮಾಡದಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.> > ಕಾರ್ಮಿಕರಿಂದ ಬಾಡಿಗೆ ವಸೂಲಿ ಮಾಡಿದ್ದಲ್ಲಿ ಸಂಬಂಧಪಟ್ಟ ಮನೆ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವುದಾಗಿ ತಿಳಿಸಿದ್ದಾರೆ.
ಒಂದು ವೇಳೆ ಮನೆ ಬಾಡಿಗೆ ಶುಲ್ಕಗಳನ್ನು ವಸೂಲು ಮಾಡುತ್ತಿರುವ ಬಗ್ಗೆ ದೂರುಗಳು ಬಂದಲ್ಲಿ, ಶೆಡ್/ಮನೆ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ ಅವರಿಗೆ ನೀಡಲಾಗಿರುವ ಪರವಾನಿಗೆ ರದ್ದು ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :