ರಾಜ್ಯದಲ್ಲಿ ಕೆಪಿಸಿಸಿ ಎರಡು ದಿನಗಳ ಕಾಲ (ಜೂನ್ 2 & 3) ಹಮ್ಮಿಕೊಂಡಿದ್ದ ನವ ಸಂಕಲ್ಪ ಚಿಂತನ ಶಿಬಿರ ಕೊನೆಗೊಂಡಿದೆ. ಇತ್ತೀಚೆಗೆ AICC ರಾಜಸ್ಥಾನದ ಉದಯ್ ಪುರದಲ್ಲಿ ನಡೆಸಿದ್ದ ಚಿಂತನ್ ಶಿಬಿರದ ಮಾದರಿಯಲ್ಲೇ ನಗರದ ಹೊರವಲಯದಲ್ಲಿ ರಾಜ್ಯ ಕಾಂಗ್ರೆಸ್ ಕೂಡ ಚಿಂತನ್ ಶಿಬಿರ ಹಮ್ಮಿಕೊಂಡಿತ್ತು. ಶಿಬಿರದಲ್ಲಿ ರಾಜ್ಯದ ಎಲ್ಲಾ ಪ್ರಮುಖ ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದು, ಮುಂದಿನ ಚುನಾವಣೆ ದೃಷ್ಟಿಯಿಂದ ಈ ಶಿಬಿರ ಮಹತ್ವದ್ದಾಗಿದೆ. ಶಿಬಿರದ ಕೊನೆಯಲ್ಲಿ ಮಾಧ್ಯಮಗೋಷ್ಠಿ ಕರೆದು ಮಾತನಾಡಿದ