ಕಾಂಗ್ರೆಸ್-ಜೆಡಿಎಸ್ ಶಾಸಕರು ನಿರ್ವೀರ್ಯರು ಅಂತಾ ತುಮಕೂರಿನ ಬಿಜೆಪಿ ಮಾಜಿ ಸಂಸದ ಜಿ.ಎಸ್.ಬಸವರಾಜು ವಾಗ್ದಾಳಿ ನಡೆಸಿದ್ದಾರೆ.ಮಾಧ್ಯಮ ಗೋಷ್ಠಿಯಲ್ಲಿ ಕಾಂಗ್ರೆಸ್-ಜೆಡಿಎಸ್ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ತುಮಕೂರು ಜಿಲ್ಲೆಯ ಮೂವರು ಮಂತ್ರಿಗಳು ಸೇರಿದಂತೆ ಕಾಂಗ್ರೆಸ್- ಜೆಡಿಎಸ್ ಶಾಸಕರು ನಿರ್ವೀರ್ಯರಾಗಿದ್ದಾರೆ. ತುಮಕೂರು ಜಿಲ್ಲೆಯನ್ನ ನಾಶ ಮಾಡಲು ಇವರು ಮುಂದಾಗಿದ್ದು, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಸೇರಿದಂತೆ ಎಲ್ಲರೂ ನಿರ್ವೀಯರು ಅಂತಾ ಜರಿದಿದ್ದಾರೆ.ಪರಮೇಶ್ವರ್ ಝಿರೋ ಟ್ರಾಫಿಕ್ ಗೋಸ್ಕರ ಹೊರಾಡ್ತಾರೆ, ಡಿ.ಕೆ. ಬ್ರದರ್ಸ್ ದಬ್ಬಾಳಿಕೆ ಜಿಲ್ಲೆ ಮೇಲೆ ಹೆಚ್ಚಾಗಿದೆ.