ಬಡವರಿಗೆ ಗಗನ ಕುಸುಮವಾಗಿದ್ದ ಅಂಗಾಂಗ ಜೋಡನೆಗೆ ರಾಜ್ಯ ಸರ್ಕಾರವೇ ಅಂಗಾಂಗ ಕಸಿ ಯೋಜನೆಯಡಿ ನೆರವಿಗೆ ಮುಂದಾಗಿದೆ.ಬಿಪಿಎಲ್ ಕಾರ್ಡು ಹೊಂದಿದವರ ಸೂಕ್ತ ಚಿಕಿತ್ಸೆಗೆ ಸರಕಾರ ಮುಂದಾಗಿದ್ದು ಈ ಯೋಜನೆಯ ಮೊದಲ ಫಲಾನುಭವಿಯನ್ನು ಆರೋಗ್ಯ ಸಚಿವ ಬಿ.ಶ್ರೀರಾಮುಲು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿರುವ ನಾರಾಯಣ ಹೃದಯಾಲಯದಲ್ಲಿ ಸರ್ಕಾರದ ಅಂಗಾಂಗ ಕಸಿ ಯೋಜನೆಯಡಿ ಬದಲಿ ಹೃದಯ ಜೋಡಣೆ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಬಾಗಲಕೋಟೆಯ ಸಂಜು ಹೊಸಮನಿ(34) ಯನ್ನು ಆರೋಗ್ಯ