ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆಯಾಗಿ ಓರ್ವ ನಾಪತ್ತೆಯಾಗಿದ್ದು, ಇಬ್ಬರು ರಕ್ಷಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಜಾಲಿ ಸಮುದ್ರದಲ್ಲಿ ನಡೆದಿದೆ. ಘಟನೆಯಲ್ಲಿ ಜಾಲಿ ಗ್ರಾಮದ ನಾಗರಾಜ ಮೊಗೇರ ನಾಪತ್ತೆಯಾಗಿದ್ದು, ಪುರುಷೋತ್ತಮ ಹಾಗೂ ವಿಕ್ಟರ್ ರಾಜ ಎಂಬುವ ಇಬ್ಬರ ರಕ್ಷಣೆ ಮಾಡಲಾಗಿದೆ. ಈ ಮೂವರು ಸೇರಿಕೊಂಡು ಜಾಲಿ ಬಳಿ ಅರಬ್ಬೀ ಸಮುದ್ರದಲ್ಲಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಸಮುದ್ರದ ಅಲೆ ದೋಣಿಗೆ ಅಪ್ಪಳಿಸಿ ದೋಣಿ ಪಲ್ಟಿಯಾಗಿ