ಅರಣ್ಯ ಭೂಮಿ ಒತ್ತುವರಿ ಮಾಡಿ ರೆಸಾರ್ಟ್ ನಿರ್ಮಾಣ ಮಾಡಿದ್ದ ಹಿನ್ನೆಲೆ, ಅರಣ್ಯ ಇಲಾಖೆ ರೆಸಾರ್ಟ್ಗೆ ಬೀಗ ಹಾಕಿದ್ದಾರೆ. ಹಾಸನ ಅರಣ್ಯ ಇಲಾಖೆಯಿಂದ ಸಕಲೇಶಪುರ ತಾಲ್ಲೂಕಿನ ಯಸಳೂರು ವಲಯದ ಮಂಕನಹಳ್ಳಿ ವ್ಯಾಪ್ತಿಯಲ್ಲಿ ಡೀಮ್ಡ್ ಫಾರೆಸ್ಟ್ ಒತ್ತುವರಿ ತೆರವು ಕಾರ್ಯ ನಡೆದಿತ್ತು. ಪಾಂಡು, ಶರಣಪ್ಪ ಪಾಟೀಲ್, ಪುಟ್ಟರಾಜ್ ಎಂಬುವವರು ಒತ್ತುವರಿ ಮಾಡಿದ್ದರು. 3 ಎಕರೆ 17 ಗುಂಟೆ ಡೀಮ್ಡ್ ಫಾರೆಸ್ಟ್ ಒತ್ತುವರಿ ಮಾಡಿ ವ್ಯಕ್ತಿಗಳು ರೆಸಾರ್ಟ್ ನಿರ್ಮಿಸಿದ್ರು. ವಲಯ ಅರಣ್ಯ ಇಲಾಖೆ ಅಧಿಕಾರಿಗಳು