ಹೆಣ್ಣಿನ ಜಾಣತನ ಪ್ರಕೃತಿಕೊಟ್ಟ ವರ ಎಂದವರಾರು?

ಕಲಬುರಗಿ| Jagadeesh| Last Modified ಶುಕ್ರವಾರ, 17 ಆಗಸ್ಟ್ 2018 (21:35 IST)
ಹೆಣ್ಣಿಗೆ ಬುದ್ಧಿವಂತಿಕೆ, ಜಾಣತನ ಪ್ರಕೃತಿ ಮಾತೆ ಕೊಟ್ಟ ವರವಾಗಿದೆ. ಹೀಗಂತ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಇರುವವರು ತೊಡುವ ಬಟ್ಟೆಗಳು ಸಮಾಜ ಸ್ವೀಕರಿಸುವಂತೆ ಇರಬೇಕು. ಹೆಣ್ಣಿನ ಬುದ್ಧಿವಂತಿಕೆ ಹಾಗೂ ಜಾಣತನ ವರವಾಗಿದ್ದು ಅವನ್ನು ಮಹಿಳೆ ಹಲವು ಬಾರಿ ರುಜುವಾತುಪಡಿಸಿದ್ದಾಳೆ ಎಂದು ರಾಜ್ಯ ಸರಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಹೇಳಿದ್ದಾರೆ.

ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮಾತೋಶ್ರೀ ಗೋದುತಾಯಿ ದೊಡ್ಡಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘ ಕಲಾವಾಣಿ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ತಾರತಮ್ಯ ಮನೆಯಲ್ಲೇ ಪ್ರಾರಂಭವಾಗುತ್ತದೆ. ಪುರುಷರಿಗೆ ಸಿಕ್ಕಷ್ಟು ಪ್ರಾಮುಖ್ಯತೆ ಸಿಗುವುದಿಲ್ಲ. ಹೀಗಾಗಿ ಹಿಂದೆ ಉಳಿಯುತ್ತಿದ್ದಾರೆ. ಉನ್ನತ ಪಡೆಯಲು ಯುವತಿಯರು ಮುಂದೆ ಬರಬೇಕು ಎಂದರು.ಇದರಲ್ಲಿ ಇನ್ನಷ್ಟು ಓದಿ :