ಕಾವೇರಿ ನೀರು ತಮಿಳುನಾಡಿಗೆ ಹರಿದು ಹೋಗ್ತಿದ್ರೂ ನೀರು ರಿಲೀಸ್ ಮಾಡಿಲ್ಲವೆಂದು ರಾಜ್ಯ ಸರ್ಕಾರ ಸುಳ್ಳು ಹೇಳಿಕೊಂಡು ಬರ್ತಿದೆ. ನಾವು ನೀರು ಬಿಡದೇ ಇದ್ರೂ ಹೋಗೋ ನೀರು ಹೋಗುತ್ತಲೇ ಇದೆ. ನಾವ್ಯಾಕೆ ಆ ಬಗ್ಗೆ ಚರ್ಚೆ ಮಾಡೋದು. ಸೋರಿಕೆ ವಾಟರ್ ಬಿಟ್ರೆ, ಬೇರೆ ನೀರು ಹೋಗುತ್ತಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ್ದ ಅವರು, 3 ಸಾವಿರ ಕ್ಯೂಸೆಕ್ ಸೀಪೇಜ್ ಅಂದರೆ ಸೋರಿಕೆ ನೀರು ಹೋಗುತ್ತಿದೆ ಎಂದು ತಿಳಿಸಿದ್ದಾರೆ.