ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಸದ್ಯ ಅನುದಾನ ಬಿಡುಗಡೆ ಮಾಡಲು ಹಣವಿಲ್ಲ ಎಂದಿದ್ದ ಸರ್ಕಾರ, ಇದೀಗ ದುಂದುವೆಚ್ಚಕ್ಕೆ ಮುಂದಾಗಿದೆ. ಕೋಟಿಗಟ್ಟಲೇ ಹಣ ಖರ್ಚು ಮಾಡಿ ರಾಜೀವ್ ಗಾಂಧಿ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಳ್ತಿದೆ. ಶೇಷಾದ್ರಿಪುರಂನ ಸ್ವಸ್ತಿಕ್ ಸರ್ಕಲ್ ಬಳಿ ರಾಜೀವ್ಗಾಂಧಿ ಪ್ರತಿಮೆ ನಿರ್ಮಿಸೋಕೆ ಬಿಬಿಎಂಪಿ ಟೆಂಡರ್ ಕರೆದಿದೆ. ಇನ್ನು ಪುತ್ಥಳಿ ಸ್ಥಾಪನೆಗೆ ಬರೋಬ್ಬರಿ 1ಕೋಟಿ 7ಲಕ್ಷ 80 ಸಾವಿರ ಮೀಸಲಿಟ್ಟಿದ್ದು ಕಂಚಿನ ಪುತ್ಥಳಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಜ್ಜಾಗಿದೆ.