ಕರ್ನಾಟಕದಲ್ಲೂ ಟ್ರಾಫಿಕ್ ದುಬಾರಿ ದಂಡಕ್ಕೆ ಬ್ರೇಕ್ ಹಾಕಲು ಸರ್ಕಾರ ಚಿಂತನೆ

ಬೆಂಗಳೂರು, ಬುಧವಾರ, 11 ಸೆಪ್ಟಂಬರ್ 2019 (11:36 IST)

ಬೆಂಗಳೂರು : ಹೊಸದಾಗಿ ಬಂದಿರುವ ಟ್ರಾಫಿಕ್ ರೂಲ್ಸ್ ಗೆ ಸವಾರರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಗುಜರಾತ್ ನಂತರ ಕರ್ನಾಟಕದಲ್ಲೂ ದುಬಾರಿ ದಂಡಕ್ಕೆ ಬ್ರೇಕ್ ಹಾಕುವ ಸಂಭವ ಇದೆ ಎನ್ನಲಾಗಿದೆ.




ಕೇಂದ್ರ ಸರ್ಕಾರ ಸೆ.1ರಿಂದ ಜಾರಿ ಮಾಡಿದ ಹೊಸ ಟ್ರಾಫಿಕ್ ರೂಲ್ಸ್ ಸವಾರರಿಗೆ ಹೊರೆಯಾದ ಹಿನ್ನಲೆಯಲ್ಲಿ ಗುಜರಾತ್ ಸರ್ಕಾರ ಪ್ರಮಾಣವನ್ನು ಶೇ.50ರಷ್ಟು ಕಡಿತಗೊಳಿಸಿದೆ. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ದಂಡ ಕಡಿತದ ಕುರಿತು ಚಿಂತನೆ ನಡೆಸಲಿದೆ ಎನ್ನಲಾಗಿದೆ.


ಈ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಮನವಿ ಮಾಡಿದ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ಸಹಮತ ನೀಡಿದೆ. ಅಲ್ಲದೇ ಕಾನೂನು, ಸಾರಿಗೆ, ಗೃಹ ಇಲಾಖೆಯ ಅಧಿಕಾರಿಗಳು ಎಷ್ಟು ಪ್ರಮಾಣದಲ್ಲಿ ಕಡಿತ ಮಾಡಬೇಕು  ಎಂಬ ಕುರಿತು ಚರ್ಚೆ ನಡೆಸಲಿದ್ದು, ಬಳಿಕ ಸಿಎಂ ಜೊತೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಆದಕಾರಣ ಶೀಘ್ರದಲ್ಲಿಯೇ ದಂಡ ಕಡಿತ ಅಧಿಕೃತ ಆದೇಶ ಹೊರಬೀಳಲಿದೆ ಎನ್ನಲಾಗಿದೆ.




ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್

ಆಂಧ್ರಪ್ರದೇಶ : ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ...

news

ಪ್ರೇಯಸಿ ಗರ್ಭಿಣಿ ಎಂದು ತಿಳಿದ ತಕ್ಷಣ ಪೊಲೀಸ್ ಅಧಿಕಾರಿಯ ಮಗ ಮಾಡಿದ್ದೇನು ಗೊತ್ತಾ?

ಕಲಬುರಗಿ : ಪೊಲೀಸ್ ಅಧಿಕಾರಿಯ ಮಗನೊಬ್ಬ ಯುವತಿಯೊಬ್ಬಳನ್ನು ಪ್ರೀತಿಸಿ, ಗರ್ಭಿಣಿ ಮಾಡಿದ್ದಲ್ಲದೆ ಆಕೆಗೆ ...

news

ಒಕ್ಕಲಿಗ ಸಮುದಾಯದ ಪ್ರತಿಭಟನೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗದಂತೆ ತಡೆಯಲು ಬಿಜೆಪಿ ರೂಪಿಸಿದೆ ಈ ತಂತ್ರ

ಬೆಂಗಳೂರು : ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗರು ನಡೆಸುತ್ತಿರುವ ಪ್ರತಿಭಟನೆ ಜಾತಿ ಬಣ್ಣದ ತಿರುವು ...

news

ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗರಿಂದ ಇಂದು ಬೃಹತ್ ಪ್ರತಿಭಟನಾ ಮೆರವಣಿಗೆ

ಬೆಂಗಳೂರು : ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಒಕ್ಕಲಿಗರು ರಾಜಧಾನಿಯಲ್ಲಿ ಬೃಹತ್ ಪ್ರತಿಭಟನಾ ...