ಲಾಕ್ ಡೌನ್ ನಲ್ಲಿ ಜನರ ಕಷ್ಟಕ್ಕೆ ಪೊಲೀಸ್ ಹೃದಯವೊಂದು ವಿನೂತನವಾಗಿ ಮಿಡಿದು ಗಮನ ಸೆಳೆದಿದೆ. ಲಾಕ್ಡೌನ್ ಅವಧಿಯಲ್ಲಿ ಹಾವೇರಿ ಜಿಲ್ಲೆಯಲ್ಲಿ ರಕ್ತದ ತೀವ್ರ ಅಭಾವ ಇರುವುದನ್ನು ಮನಗಂಡು ರಕ್ತದಾನಿಗಳಿಗೆ ಉಚಿತ ವಾಹನ ವ್ಯವಸ್ಥೆ ಮಾಡುವ ಮೂಲಕ ಕಾನ್ಸ್ಟೆಬಲ್ ಕರಬಸಪ್ಪ ಗೊಂದಿ ಅವರು ಜಿಲ್ಲೆಯ ಜನರ ಮನಗೆದ್ದಿದ್ದಾರೆ.ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕು ಆಡೂರು ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಕರಬಸಪ್ಪ ಗೊಂದಿ ಅವರು ಇದುವರೆಗೆ ಸ್ವತಃ 27 ಬಾರಿ ರಕ್ತದಾನ ಮಾಡಿದ್ದಾರೆ. ರಕ್ತದಾನ