ಸರ್ಕಾರದ ವಿರುದ್ಧ ಅಕ್ಷರ ದಾಸೋಹ ನೌಕರ ಸಂಘದ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಕಚೇರಿ ಮುಂದೆ ಬಿಸಿಯೂಟ ಕಾರ್ಯಕರ್ತರ ಹೋರಾಟ ನಡೆಯಿತು. 60 ವರ್ಷದ ಮೇಲ್ಪಟ್ಟ ಬಿಸಿಯೂಟ ಕಾರ್ಯಕರ್ತರ ನಿವೃತ್ತಿ ಆದೇಶ ವಿರುದ್ದ ಧರಣಿ ನಡೆಸಿದರು. 2001-02 ರಲ್ಲಿ ಅಡುಗೆ ಕೆಲಸಕ್ಕೆ ಸೇರ್ಪಡೆ ವೇಳೆ ವಿದ್ಯಾಭ್ಯಾಸ ಹಾಗೂ ವಯಸ್ಸಿನ ಅರ್ಹತೆ ಮಾತ್ರ ಇತ್ತು. ಅದರಲ್ಲಿ ನಿವೃತ್ತಿ ವಯಸ್ಸಿನ ಕೈಪಿಡಿ ಇರಲಿಲ್ಲ. ನಿವೃತ್ತಿ ಹೆಸರಲ್ಲಿ ಅಮಾನವೀಯವಾಗಿ ಬಿಡುಗಡೆ ಮಾಡ್ತಿದ್ದಾರೆ.