ಪತ್ನಿಯನ್ನ ಹತ್ಯೆಗೈದು, ಆಸ್ಪತ್ರೆಗೆ ತಂದು ಆಕೆ ಮಾತನಾಡುತ್ತಿಲ್ಲ ಎಂದು ಕಥೆ ಕಟ್ಟಿದ್ದ ಪತಿಯನ್ನ ಯಶವಂತಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. 19ವರ್ಷದ ಪ್ರಿಯಾ ಕೊಲೆಯಾದ ದುರ್ದೈವಿಯಾಗಿದ್ರೆ ಶರತ್ ಬಂಧಿತ ಆರೋಪಿಯಾಗಿದ್ದಾನೆ. ಜೂನ್ 1ರಂದು ಯಶವಂತಪುರದ ಖಾಸಗಿ ಆಸ್ಪತ್ರೆಗೆ ಪತ್ನಿಯ ಶವದೊಂದಿಗೆ ಬಂದಿದ್ದ ಆರೋಪಿ ಆಕೆ ಮಾತನಾಡುತ್ತಿಲ್ಲ ಎಂದು ಗೋಳಾಡಿದ್ದ. ವೈದ್ಯರು ಪರಿಶೀಲಿಸಿದಾಗ ಆತನ ಪತ್ನಿ ಸಾವನ್ನಪ್ಪಿರುವುವುದು ಖಚಿತವಾಗಿತ್ತು. ಪತ್ನಿ ಸಾವನ್ನಪ್ಪಿರುವುದನ್ನ ವೈದ್ಯರು ಖಚಿತಗೊಳಿಸಿದ ನಂತರವೂ ಸಹ ಆರೋಪಿ ಜೋರಾಗಿ ಗೋಳಾಡಿದ್ದ.ಈ ಬಗ್ಗೆ