Widgets Magazine

ಒಬ್ಬಳೊಂದಿಗೆ ಇಬ್ಬರ ಅನೈತಿಕ ಸಂಬಂಧ : ಮುಂದಾಗಿದ್ದೇನು?

ಲಕ್ನೋ| Jagadeesh| Last Modified ಭಾನುವಾರ, 18 ಅಕ್ಟೋಬರ್ 2020 (18:16 IST)
ಮಹಿಳೆಯೊಬ್ಬಳೊಂದಿಗೆ ಇಬ್ಬರು ಹೊಂದಿದ್ದರಿಂದಾಗಿ ಯುವಕನೊಬ್ಬನ ಕೊಲೆ ನಡೆದಿದೆ.

ಆರೋಪಿ ರಾಮಕೇಶ್ ಎಂಬಾತ ಮಹಿಳೆಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಇದೇ ಮಹಿಳೆಯ ಜೊತೆಗೆ ಬಿಜೆಪಿ ಮುಖಂಡನ ಪುತ್ರ ರಾಣಾ ಎಂಬಾತನೂ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ರಾಣಾಗೆ ರಾಮಕೇಶ್ ಈ ಹಿಂದೆ ಮಹಿಳೆಯ ಜೊತೆ ಸಲುಗೆ ಬಿಡು ಎಂದು ವಾರ್ನಿಂಗ್ ಮಾಡಿದ್ದ ಎನ್ನಲಾಗಿದೆ. ಆದರೆ ರಾಣಾ ಮಹಿಳೆಯ ಸಂಬಂಧ ಬಿಟ್ಟಿರಲಿಲ್ಲ.

ಕೊನೆಗೆ ಅರಣ್ಯವೊಂದರಲ್ಲಿ ರಾಣಾ ಮೇಲೆ ರಾಮಕೇಶ್ ತನ್ನ ಸ್ನೇಹಿತರ ಜೊತೆ ಸೇರಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಉತ್ತರ ಪ್ರದೇಶದ ಗುಲರಿಹಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.






ಇದರಲ್ಲಿ ಇನ್ನಷ್ಟು ಓದಿ :