ಆಟವಾಡಲು ತೆರಳಿದ್ದ ಪುಟ್ಟ ಬಾಲಕ 11 ನೇ ಮಹಡಿಯಿಂದ ಆಯತಪ್ಪಿ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಆರ್ ಆರ್ ನಗರದಲ್ಲಿ ನಡೆದಿದೆ.ಬನಶಂಕರಿ 3 ಹಂತದ ಶೋಭಾ ಅಪಾರ್ಟ್ ಮೆಂಟ್ ನ ಟೇರಸ್ ನಲ್ಲಿ ಆಟವಾಡಲು ಗಗನ್ ತನ್ನ ಸ್ನೇಹಿತರೊಂದಿಗೆ ತೆರಳಿದ್ದ ಈ ವೇಳೆ ಮಕ್ಕಳೊಂದಿಗೆ ಆಟದಲ್ಲಿ ಮಗ್ನವಾಗಿದ್ದ ಬಾಲಕ ಆಯತಪ್ಪಿ 11 ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ.ಬಿದ್ದ ರಭಸಕ್ಕೆ ಸಂಪೂರ್ಣವಾಗಿ ಗಾಯಗೊಂಡ ಗಗನ್ ನನ್ನು ಆಸ್ಪತ್ರೆಗೆ ದಾಖಲಿಸಿತ್ತಾದ್ರು ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾನೆ.ಇನ್ನು ತಂದೆ ತಾಯಿ ಮನೆಯಲ್ಲಿ ಇಲ್ಲದ ಸಂದರ್ಭ ಈ ಘಟನೆ ಸಂಭವಿಸಿದ್ದು ಇದೀಗ ಆರ್.ಆರ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.