ಇಬ್ಬರು ವ್ಯಾಪಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಕುಖ್ಯಾತ ರೌಡಿ ಗೌತಮ್ ಅಲಿಯಾಸ್ ಆರ್ಮುಗಂಗೆ ಯನ್ನು ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.ಯಶವಂತಪುರ ಮಾಡೆಲ್ ಕಾಲೋನಿಯ ರೌಡಿ ಗೌತಮ್(22)ಬಲಗಾಲಿಗೆ ಗುಂಡೇಟ್ ತಗುಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಾಣಾಪಾಯದಿಂದ ರೌಡಿ ಪಾರಾಗಿದ್ದಾನೆ. ಬಂಧಿಸಲು ಹೋದಾಗ ಗೌತಮ್ ಲಾಂಗ್ನಿಂದ ನಡೆಸಿದ ಹಲ್ಲೆಯಿಂದ ಗಾಯಗೊಂಡಿರುವ ಯಶವಂತಪುರ ಠಾಣೆಯ ಪೇದೆಗಳಾದ ಶಿವಕುಮಾರ್ ಹಾಗೂ ಭಜಂತ್ರಿ ಅವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಯಶವಂತಪುರ ರೈಲ್ವೆ ನಿಲ್ದಾಣ