ಚಿಕ್ಕಬಳ್ಳಾಪುರ : ಕ್ಷುಲಕ ಕಾರಣಕ್ಕೆ ಜೆ.ಡಿ.ಎಸ್. ಕಾರ್ಯಕರ್ತನೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಕೈ ಕತ್ತರಿಸಿ ಹಲ್ಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಅರ್ಕುಂದ ಗ್ರಾಮದಲ್ಲಿ ನಡೆದಿದೆ. ಜೆ.ಡಿ.ಎಸ್. ಕಾರ್ಯಕರ್ತ ಲೋಕೇಶ್ ಎಂಬುವವರು ಈ ಕೃತ್ಯವೆಸಗಿದ ಆರೋಪಿಯಾಗಿದ್ದು, ಕಾಂಗ್ರೆಸ್ ಕಾರ್ಯಕರ್ತ ರವಿಕುಮಾರ್ ಅವರು ಈತನಿಂದ ಹಲ್ಲೆಗೊಳಗಾದ ವ್ಯಕ್ತಿ. ಶಾಸಕ ಸುಧಾಕರ್ ಅವರ ಕಡೆಯಿಂದ ರವಿಕುಮಾರ್ ಸೀರೆ ಹಂಚುತ್ತಿದ್ದ ಸಂದರ್ಭದಲ್ಲಿ ಅವರಿಬ್ಬರ ನಡುವೆ ಜಗಳ ಶುರುವಾಗಿ ಕೊನೆಗೆ ಅದು ವಿಕೋಪಕ್ಕೆ ಹೋಗಿದ್ದರಿಂದ