ಬೆಂಗಳೂರು: ಕರಾವಳಿ ಜಾನಪದ ಕ್ರೀಡೆ ಕಂಬಳ ನಿಷೇಧ ತೆರವು ಕುರಿತ ಆದೇಶಕ್ಕೆ ರಾಷ್ಟ್ರಪತಿ ಅಂಕಿತ ದೊರೆತಿದೆ. ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಸಹ ಮಂಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸಚಿವ ಟಿ.ಬಿ.ಜಯಚಂದ್ರ, ಭಡ್ತಿ ಮೀಸಲಾತಿ, ಕಂಬಳ ಆಚರಣೆ ಮುಂದುವರಿಕೆ, ಮೂಢನಂಬಿಕೆ ನಿಷೇಧ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನಿಯಂತ್ರಿಸುವ ಸಂಬಂಧ ನಾಲ್ಕು ಪ್ರಮುಖ ಕಾನೂನು ತಿದ್ದುಪಡಿ ಮಸೂದೆಗಳನ್ನು ನ. 13ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಮಂಸಿಸಲು ರಾಜ್ಯ ಸರ್ಕಾರ